ಕ್ರಿಕೆಟ್

ಪಿಎಸ್ಎಲ್ ಸ್ಪಾಟ್ ಫಿಕ್ಸಿಂಗ್: ಐವರು ಪಾಕ್ ಕ್ರಿಕೆಟ್ ಆಟಗಾರರಿಗೆ ನಿಷೇಧ

Vishwanath S
ಇಸ್ಲಾಮಾಬಾದ್: ಪಾಕಿಸ್ತಾನ ಸೂಪರ್ ಲೀಗ್ ನಲ್ಲಿ ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ತಪ್ಪಿತಸ್ಥರಾಗಿರುವ ಪಾಕಿಸ್ತಾನದ ಐವರು ಕ್ರಿಕೆಟ್ ಆಟಗಾರರಿಗೆ ವಿದೇಶಗಳಲ್ಲಿ ಆಡದಂತೆ ನಿಷೇಧ ಹೇರಲು ಪಾಕಿಸ್ತಾನ ಸರ್ಕಾರ ತೀರ್ಮಾನಿಸಿದೆ. 
ಪಿಎಸ್ಎಲ್ ಟೂರ್ನಿಯಲ್ಲಿ ಶರ್ಜಿಲ್ ಖಾನ್, ಖಾಲಿದ್ ಲತೀಫ್, ಮೊಹಮ್ಮದ್ ಇರ್ಫಾನ್, ಶಹಜೀಬ್ ಹಸನ್ ಮತ್ತು ನಾಸೀರ್ ಜೆಮ್ ಶೆಡ್ ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಭಾಗಿಯಾಗಿದ್ದರು. ಈ ಆರೋಪ ಸಾಭೀತಾಗಿದ್ದರಿಂದ ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ) ಈ ಆಟಗಾರರನ್ನು ಅಮಾನತು ಮಾಡಿತ್ತು. 
ಯುನೈಟೆಡ್ ಅರಬ್ ಎಮೀರೇಟ್ಸ್ ನಲ್ಲಿ ಕಳೆದ ತಿಂಗಳು ನಡೆದ ಪಿಎಸ್ಎಲ್ ಟೂರ್ನಿಯ ಮೊದಲ ಪಂದ್ಯದಲ್ಲಿ ಸ್ಪಾಟ್ ಫಿಕ್ಸಿಂಗ್ ನಡೆಸಿದ ಆರೋಪದಿಂದಾಗಿ ಶಾರ್ಜಿಲ್ ಮತ್ತು ಲತೀಫ್ ಅವರನ್ನು ತವರಿಗೆ ಕಳುಹಿಸಲಾಗಿತ್ತು. ಪಿಸಿಬಿ ಭ್ರಷ್ಟಾಚಾರ ನಿಗ್ರಹದಳದ ಅಧಿಕಾರಿಗಳು ಪಿಎಸ್ಎಲ್ ನಡೆಯುವ ವೇಳೆಯಲ್ಲಿಯೇ ಫಿಕ್ಸಿಂಗ್ ಪ್ರಕರಣದ ಕುರಿತಾಗಿ ಇರ್ಫಾನ್ ಮತ್ತು ಹಸನ್ ಅವರಿಗೆ ವಿಚಾರಣೆ ನಡೆಸಿದ್ದರು. ಆದರೂ ಈ ಇಬ್ಬರೂ ಆಟಗಾರರಿಗೆ ಟೂರ್ನಿಯಲ್ಲಿ ಆಡುವ ಅವಕಾಶ ನೀಡಲಾಗಿತ್ತು. 
SCROLL FOR NEXT